ಮುಕ್ತವಾಗಿ ಮಾತನಾಡಿ

ವಿಭಿನ್ನ ಸಂದೇಶ ಕಳುಹಿಸುವ ಅನುಭವಕ್ಕಾಗಿ "ಹಲೋ" ಹೇಳಿ. ನೀವು ನಿರೀಕ್ಷಿಸುವ ಎಲ್ಲಾ ವೈಶಿಷ್ಟ್ಯಗಳ ಸಂಯೋಜನೆಯೊಂದಿಗೆ, ಗೌಪ್ಯತೆಯ ಮೇಲೆ ಅನಿರೀಕ್ಷಿತ ಗಮನ.


Signal ಪಡೆಯಿರಿ

Signal ಅನ್ನು ಏಕೆ ಬಳಸಬೇಕು?

Signal ಸರಳ, ಶಕ್ತಿಯುತ ಮತ್ತು ಸುರಕ್ಷಿತ ಮೆಸೆಂಜರ್ ಏಕೆಂದು ನೋಡಲು ಕೆಳಗೆ ಅನ್ವೇಷಿಸಿ

ಅಭದ್ರತೆ ಇಲ್ಲದೆ ಹಂಚಿಕೊಳ್ಳಿ

ಅತ್ಯಾಧುನಿಕ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ (ಮುಕ್ತ ಮೂಲದ Signal ಪ್ರೊಟೊಕಾಲ್‌ನಿಂದ ನಡೆಸಲ್ಪಡುತ್ತದೆ) ನಿಮ್ಮ ಸಂಭಾಷಣೆಗಳನ್ನು ಸುರಕ್ಷಿತವಾಗಿರಿಸುತ್ತದೆ. ನಿಮ್ಮ ಸಂದೇಶಗಳನ್ನು ಓದಲು ಅಥವಾ ನಿಮ್ಮ ಕರೆಗಳನ್ನು ಆಲಿಸಲು ನಮಗೆ ಸಾಧ್ಯವಿಲ್ಲ, ಮತ್ತು ಬೇರೆ ಯಾರಿಗೂ ಸಾಧ್ಯವಿಲ್ಲ. ಗೌಪ್ಯತೆ ಐಚ್ಚಿಕ ವಿಧಾನವಲ್ಲ — ಇದು Signal ಕಾರ್ಯನಿರ್ವಹಿಸುವ ವಿಧಾನವಾಗಿದೆ. ಪ್ರತಿ ಸಂದೇಶ, ಪ್ರತಿ ಕರೆ, ಪ್ರತಿ ಬಾರಿ.

ಏನಾದರೂ ಹೇಳಿ

ಪಠ್ಯ, ಧ್ವನಿ ಸಂದೇಶಗಳು, ಫೊಟೋಗಳು, ವೀಡಿಯೊಗಳು, GIF‌ಗಳು ಮತ್ತು ಫೈಲ್‌ಗಳನ್ನು ಉಚಿತವಾಗಿ ಹಂಚಿಕೊಳ್ಳಿ. Signal ನಿಮ್ಮ ಫೋನ್‌ನ ಡೇಟಾ ಸಂಪರ್ಕವನ್ನು ಬಳಸುತ್ತದೆ ಆದ್ದರಿಂದ ನೀವು SMS ಮತ್ತು MMS ಶುಲ್ಕವನ್ನು ತಪ್ಪಿಸಬಹುದು.

ಮುಕ್ತವಾಗಿ ಮಾತನಾಡಿ

ದೂರವನ್ನು ಆಧರಿಸಿದ ಯಾವುದೇ ಶುಲ್ಕವಿಲ್ಲದೆ, ಪಟ್ಟಣಗಳಲ್ಲಿ ಅಥವಾ ಸಾಗರದಾಚೆಯಲ್ಲಿ ವಾಸಿಸುವ ಜನರಿಗೆ ಅತ್ಯಂತ-ಸ್ಪಷ್ಟ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಮಾಡಿ.

ಗೌಪ್ಯತೆ ಸ್ಟಿಕ್ ಮಾಡಿ

ಎನ್‌ಕ್ರಿಪ್ಟ್ ಮಾಡಿದ ಸ್ಟಿಕರ್‌ಗಳೊಂದಿಗೆ ನಿಮ್ಮ ಸಂವಾದಗಳಿಗೆ ಅಭಿವ್ಯಕ್ತಿಯ ಹೊಸ ಪದರವನ್ನು ಸೇರಿಸಿ. ನಿಮ್ಮ ಸ್ವಂತ ಸ್ಟಿಕರ್ ಪ್ಯಾಕ್‌ಗಳನ್ನು ಸಹ ನೀವು ರಚಿಸಬಹುದು ಮತ್ತು ಹಂಚಿಕೊಳ್ಳಬಹುದು.

ಗ್ರೂಪ್‌ಗಳೊಂದಿಗೆ ಒಟ್ಟಿಗೆ ಕೂಡಿ

ಗ್ರೂಪ್ ಚಾಟ್‌ಗಳು ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಲು ಸುಲಭವಾಗಿಸುತ್ತದೆ.

ಜಾಹೀರಾತುಗಳಿಲ್ಲ. ಟ್ರ್ಯಾಕರ್‌ಗಳಿಲ್ಲ. ಕಿರುಕುಳಗಳಿಲ್ಲ.

Signalನಲ್ಲಿ ಯಾವುದೇ ಜಾಹೀರಾತುಗಳಿಲ್ಲ, ಸಂಯೋಜಿತ ಮಾರಾಟಗಾರರಿಲ್ಲ, ಮತ್ತು ಅಹಿತಕರ ಟ್ರ್ಯಾಕಿಂಗ್ ಇಲ್ಲ. ಆದ್ದರಿಂದ ನಿಮಗೆ ಮುಖ್ಯವಾದ ವ್ಯಕ್ತಿಗಳೊಂದಿಗೆ ಮುಖ್ಯವಾದ ಕ್ಷಣಗಳನ್ನು ಹಂಚಿಕೊಳ್ಳುವತ್ತ ಗಮನ ಹರಿಸಿ.

ಎಲ್ಲರಿಗೂ ಉಚಿತ

Signal ಎಂಬುದು ಒಂದು ಸ್ವತಂತ್ರ ಲಾಭರಹಿತ ವೇದಿಕೆಯಾಗಿದೆ. ನಾವು ಯಾವುದೇ ಪ್ರಮುಖ ಟೆಕ್ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಿಲ್ಲ, ಮತ್ತು ನಮ್ಮನ್ನು ಎಂದಿಗೂ ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ. ನಿಮ್ಮಂತಹ ಜನರಿಂದ ಬರುವ ಅನುದಾನ ಮತ್ತು ದೇಣಿಗೆಗಳಿಂದ ಅಭಿವೃದ್ಧಿಯು ಬೆಂಬಲಿತವಾಗಿದೆ.

Signal ಗೆ ದೇಣಿಗೆ ನೀಡಿ